Sarthaka Flashcards
ಡಿವಿಜಿ ಅವರ ಹುಟ್ಟೂರು ಯಾವುದು?
ಡಿವಿಜಿ ಅವರ ಹುಟ್ಟೂರು ಕೋಲಾರ ಜಿಲ್ಲೆಗೆ ಸೇರಿದ ಮುಳಬಾಗಿಲು.
ಡಿವಿಜಿ ಅವರ ಮನಸ್ಸಿನ ಮೇಲೆ ಪ್ರಭಾವ ಬೀರಿದವರು ಯಾರು?
ಡಿವಿಜಿ ಅವರ ಮನಸ್ಸಿನ ಮೇಲೆ ಪ್ರಭಾವ ಬೀರಿದವರು ಅಜ್ಜಿ ಸಾಕಮ್ಮ ಮತ್ತು ¸ ಸೋದರ ಮಾವ ತಿಮ್ಮಪ್ಪ.
ಡಿವಿಜಿ ಅವರನ್ನು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಕಳುಹಿಸಿದವರು ಯಾರು?
ಡಿವಿಜಿ ಅವರನ್ನು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಕಳುಹಿಸಿದವರು ರಸೂಲ್‌ಖಾನ್.
ವಿಶ್ವೇಶ್ವರಯ್ಯ ಅವರು ಮೈಸೂರು ಸರ್ಕಾರದಲ್ಲಿ ಅಲಂಕರಿಸಿದ್ದ ಹುದ್ದೆ ಯಾವುದು?
ವಿಶ್ವೇಶ್ವರಯ್ಯ ಅವರು ಮೈಸೂರು ಸರ್ಕಾರದಲ್ಲಿ ದಿವಾನ ಹುದ್ದೆಯನ್ನು ಅಲಂಕರಿಸಿದ್ದರು.
ಡಿವಿಜಿ ಅವರು ಸ್ಥಾಪಿಸಿದ ಸಂಸ್ಥೆ ಯಾವುದು?
ಡಿವಿಜಿ ಅವರು ಸ್ಥಾಪಿಸಿದ : ಗೋಖಲೆ ಸಾರ್ವಜನಿಕ ಸಂಸ್ಥೆ .
- ಮೈಸೂರು ರಾಜ್ಯದ ಪರಮೋಚ್ಚ ಅಧಿಕಾರ ಹಿಡಿದಿದ್ದವರು ____________________.
ಮಿರ್ಜಾ ಇಸ್ಮಾಯಿಲ್
ಮಿರ್ಜಾ ಅವರ ಕಾಲಕ್ಕೆ ಡಿವಿಜಿ ದೊಡ್ಡ ___________________ ಎಂದು ವಿದ್ಯಾವಂತರ ವಲಯದಲ್ಲಿ ಹೆಸರಾಗಿದ್ದರು.
ಮೇಧಾವಿ
ಮುಳಬಾಗಿಲು ___________ ಜಿಲ್ಲೆಗೆ ಸೇರಿದೆ.
ಕೋಲಾರ
ಡಿವಿಜಿ ಅವರು ಮುಳಬಾಗಿಲಿನ __________________________ ಶಾಲೆಯಲ್ಲಿ ಲೋಯರ್ ಸೆಕೆಂಡರಿ ಪೂರ್ತಿಗೊಳಿಸಿದರು.
ಆಂಗ್ಲೋ ವರ್ನಾಕ್ಯುಲರ್
ಡಿವಿಜಿ ಅವರು ಕನ್ನಡ ಸಾರಸ್ವತ ಲೋಕದ _____________ ಎಂದು ಕರೆಸಿಕೊಂಡರು .
ಭೀಷ್ಮ