Bahumaan Flashcards
ಕೋಕಿಲವಾಣಿ
ಕೋಗಿಲೆಯ ಧ್ವನಿ
ಜಗ
ಜಗತ್ತು
ಕಾನನ
ಕಾಡು
ಕಂದರ
ಎರಡು ಬೆಟ್ಟಗಳ ನಡುವಿನ ಕಣಿವೆ
ಶ್ರೇಣಿ
ಸಾಲು
ಮರುದನ
ಮಾರ್ದನಿ
ಮಹಾಂಬರ
ವಿಶಾಲವಾದ ಆಕಾಶ
ಕೈಪರೆ
ಚಪ್ಪಾಳೆ
ಪಿಕ
ಕೋಗಿಲೆ
ಆಲಿಸು
ಮನವಿಟ್ಟು ಕೇಳು
ತರ್ಜುಮೆ
ಭಾಷಾಂತರ
ಅರಣ್ಯರೋದನ
ಯಾರ ಕಿವಿಗೂ ಬೀಳದ
ಜಗತ್ತು ಜುಮ್ಮೆಂದುದು ಯಾವ ಧ್ವನಿಗೆ?
ಕುಹೂ ಕುಹೂ ಎಂಬ ಕೋಗಿಲೆಯ ಧ್ವನಿಗೆ ಜಗತ್ತು ಜುಮ್ಮೆಂದಿತು
ಕೋಗಿಲೆ ಕೂಗನ್ನು ಯಾವುದು ಮಾರ್ದನಿಸಿತು?
ಕೋಗಿಲೆ ಕೂಗನ್ನು ನೀರವ ಪರ್ವತ ಕಾನನ ಶ್ರೇಣಿಯು ಮಾರ್ದನಿಸಿತು.
ಗಾನವನ್ನು ಕೇಳಿದ ನೀಲಾಕಾಶ ಏನು ಮಾಡಿತು?
ಗಾನವನ್ನು ಕೇಳಿದ ನೀಲಾಕಾಶ ಸುಮ್ಮನೆ ಮಾತನಾಡದೆ ಬಣ್ಣಿಸುತ್ತಿತ್ತು.
ಕಣಿವೆಯಲ್ಲಿದ್ದ ಸರೋವರ ಕೋಗಿಲೆ ಗಾನಕ್ಕೆ ಹೇಗೆ ಪ್ರತಿಕ್ರಿಯೆ ಕೊಟ್ಟಿತು?
ಕಣಿವೆಯಲ್ಲಿದ್ದ ಸರೋವರ ಕೋಗಿಲೆಯ ಗಾನ ಕೇಳುತ್ತಾ ತನ್ನ ತೆರೆಗಳಿಂದ ಚಪ್ಪಾಳೆ ತಟ್ಟಿತು.
ಕೋಗಿಲೆಯ ಕೂಗನ್ನು ಆಲಿಸಿದ ಮನುಷ್ಯ ಏನೆಂದು ಹೇಳಿದನು?
ಕೋಗಿಲೆಯ ಕೂಗನ್ನು ಆಲಿಸದ ಮನುಷ್ಯನು ಓ ಕೋಗಿಲೆಯೇ ಬಲು ಚೆಲುವಿದೇ ನಿನ್ನೀಗಾನ ಇಂಗ್ಲೀಷ್ ಗೆ ತರ್ಜುಮೆ ಮಾಡಿದರೆ ನೋಬೆಲ್ ಬಹುಮಾನ ದೊರೆಯುವುದು ಎಂದು ಹೇಳಿದನು.
ಮನುಷ್ಯನ ಮಾತಿಗೆ ಕೋಗಿಲೆ ಕೊಟ್ಟ ಉತ್ತರವೇನು?
ಮನುಷ್ಯನ ಮಾತಿಗೆ ಕೊಗಿಲೆಯು ಪ್ರತಿಕ್ರಿಯೆ ನೀಡಿದೆ. ತನ್ನ ಪಾಡಿಗೆ ತಾನೂ ಕುಹೂ ಕುಹೂ ಎಂಬ ಉತ್ತರ ನೀಡಿತು.
ಕೋಗಿಲೆಯ ಗಾನಕ್ಕೆ ಪ್ರಕೃತಿಯು ಹೇಗೆ ಸ್ಪಂದಿಸಿತು?
ಕೋಗಿಲೆಯ ಕುಹೂ ಕುಹೂ ಎಂಬ ಕೋಕಿಲವಾಣಿಯನ್ನು ಕೇಳಿ ರೋಮಾಂಚನಗೊಂಡು ಜಗ ಜುಮ್ಮೆಂದಿತು. ನೀರವ ಪರ್ತತ ಕಾನನ ಶ್ರೇಣಿ ಮರುದನಿಮಾಡಿತು. ಅದರ ಗಾನವನ್ನು ಕೇಳಿ ಮಹಾದಾಕಾಶ ಮೂಕವಿಸ್ಮಿತವಾಗಿ ಬಣ್ಣಿಸತೊಡಗಿತು. ಕಂದಕದೊಳಗಿದ್ದ ಸರೋವರ ತೆರೆಯ ಚಪ್ಪಾಳೆಯಿಕ್ಕಿತು. ಹೀಗೆ ಬಗೆಬಗೆಯಾಗಿ ಕೋಗಿಲೆಯ ಗಾನಕ್ಕೆ ಪ್ರಕೃತಿಯು ಸ್ಪಂದಿಸಿತು.
ಕೋಗಿಲೆಯ ಗಾನವನ್ನು ಆಲಿಸಿ ನೊಂದು ಮನುಷ್ಯನು ಏನೆಂದನು?
ಕೋಗಿಲೆಯ ಗಾನವನ್ನು ಆಲಿಸಿದ ಮನುಷ್ಯ ಮಲೆಗಳಲ್ಲಿ ಉಲಿಯುವ ” ಓ ಕೋಗಿಲೆಯೇ ಬಲು ಚೆಲುವಿದೆ ನಿನ್ನೀಗಾನ” ಇಂಗ್ಲೀಷಿಗೆ ತರ್ಜುಮೆ ಮಾಡಿದರೆ ದೊರೆಯುವದು ನೋಬೆಲ್ ಬಹುಮಾನ ಇಲ್ಲಿ ನಿನ್ನಗಾನ ಅರಣ್ಯರೋಧನ ಸುಮ್ಮನೆ ಹಾಡುವೆ ಕೇಳುವರಿಲ್ಲ ಎಂದು ನುಡಿದ.
ಮನುಷ್ಯನ ಮಾತಿಗೆ ಕೋಗಿಲೆಯು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಿತು?
ಕೋಗಿಲೆಯು ಮಧುರಧ್ವನಿ ಕೇಳುವವರಿಲ್ಲದ ಈ ಕಾನನದಲ್ಲಿ ಅದರ ಗಾನ ಅರಣ್ಯರೋಧನ ಎಂದು ಮನುಷ್ಯನು ನೊಂದು ನುಡಿದನು. ಅವನ ಮಾತಿಗೆ ಕೋಗಿಲೆಯು ಯಾವ ಪ್ರತಿಕ್ರಿಯೆಯನ್ನು ನೀಡದೆ ಹಾಡುವುದು ತನ್ನ ಕರ್ಮ , ಅದನ್ನು ಯಾರಾದರೂ ಕೇಳಲಿ ಅಥವಾ ಕೇಳದಿರಲಿ ಎಂಬುವಂತೆ ಪ್ರತಿಕ್ರಿಯಿಸಿತು.